ಅಂದು 07/10/1954 ರ ಸಂಜೆ ಸವಿಜಯ ದಶಮಿ. ಕೂಡ್ಲಿಗಿ ತಾಲ್ಲೂಕ್ ಅಂದಿನ ಬಳ್ಳಾರಿ ಇಂದಿನ ವಿಜಯನಗರ ಜಿಲ್ಲೆಯಲ್ಲಿ ನನ್ನ ಜನನ ವಿಜಯಕುಮಾರನೆಂಬ ನಾಮಕರಣ. ಅನಾರೋಗ್ಯ ದಿಂದ ನರಳುತಿದ್ದ ನನಗೆ ವೈದ್ಯರ ಹಾಗೂ ಶ್ರೀ ಬಾದಾಮಿ ಬನಶಂಕರಿ ಕೃಪಾಶೀವಾ೯ದದಿಂದ ಚೇತರಿಸಿಕೊಂಡು ಕೆಂಚಮಲ್ಲನಹಳ್ಳಿ ಎಂಬ ಗ್ರಾಮದಲ್ಲಿ ಬೆಳೆದೆ. ನನ್ನ ತಂದೆಯವರೇ ಕಾಯ೯ದರ್ಶಿಯಾಗಿದ್ದ ಹತ್ತಿರದ ಕಾನಾಮಡುವಿನ ಪ್ರೌಢಶಾಲೆಯಲ್ಲಿ ನನ್ನ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ 69 ರಲ್ಲಿ. ಇಂಗ್ಲಿಷ್ ಮತ್ತು ಗಣಿತದಲ್ಲಿ ಅನುತ್ತೀರ್ಣ. ರಜಾಕಾಲದಲ್ಲಿ ಒಂದು ನಾಟಕದ ಕಾರ್ಡ್ ಪೇಪರ್ ನ ಅಡ್ವರ್‌ಟೈಜ್ ಹಿಂದುಗಡೆ ಖಾಲೀ ಜಾಗದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯಚಿತ್ತ ರಚಿಸಿದೆ. ನನ್ನ ಕಲಾಸಕ್ತಿ ಕಂಡು ನನ್ನ ತಂದೆ ಬೆಂಗಳೂರಿನ ಶ್ರೀ ಎಂ.ಟಿ.ವಿ.ಆಚಾರ್ಯರ ಅಂಚೆ ಚಿತ್ರಕಲಾಶಿಕ್ಷಣ ನೀಡಿಸಿದರು. ಮತ್ತು ಬಾಂಬೆಯ ಬ್ರಿಟಿಷ್ ಇನ್ಟೂಟ್ ಆಫ್ ಕಮರ್ಶಿಯಲ್ ಆರ್ಟ್ ಮತ್ತು ಕಾರ್ಟೂನಿಂಗ್ ಅಂಚೆ ಶಿಕ್ಷಣ ನೀಡಿಸಿದರು. ಇವುಗಳ ಅಭ್ಯಾಸದ ಫಲವಾಗಿ 1971 ರಲ್ಲಿ ನಾನು ರಚಿಸಿದ ವ್ಯಂಗ್ಯ ಚಿತ್ರ ಮಲ್ಲಿಗೆ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು.ಇಲ್ಲಿಂದ ನನ್ನ ಅನೇಕ ವ್ಯಂಗ್ಯ ಚಿತ್ರ ಕಥೆ, ಕವನ, ಗಣಿತ ಸಮಸ್ಯೆ ಇತ್ಯಾದಿ ಪ್ರಕಟಗೊಂಡವು. ಮತ್ತು ಪೇಪರ್ ಏಜೆನ್ಸಿ ಮಾಡುತ್ತಿದ್ದೆ. ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಕಂ ಕಾರ್ಯದರ್ಶಿಯಾಗಿ ಕೆಲಸ.ನಿರ್ವಹಿದೆ. ನನ್ನ ವಿದ್ಯಾಭ್ಯಾಸ ಮುಂದುವರಿಸಲು ನನ್ನ ಅಣ್ಣನವರು ಶಿಕ್ಷಕ ತರಬೇತಿಗೆ ಬಳ್ಳಾರಿಗೆ ಬಂದಿದ್ದರು ಅಲ್ಲಿಗೆ ತೆರಳಿದೆ. ಅಲ್ಲಿ ನನ್ನ ಎಸ್. ಎಸ್. ಎಲ್. ಶಿಕ್ಷಣ ಪೂರೈಸಿದೆ. ಟೈಪಿಂಗ್ ತರಬೇತಿ, ಹಾಗೂ ಚಿತ್ರಿಕಲಾ ಲೋಯರ್ – ಹೈಯರ್ ಪರೀಕ್ಷೆ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದೆ.ಮನೆಗೆ ಮರಳಿದೆ ಶ್ರೀ ಹೆಚ್. ಎನ್.ಲಕ್ಕುಂಡಿಯವರು ಕಲಾಗುರುಗಳು ಇವರು ಒಂದು ಅಂಚೆ ಪತ್ರಬರೆದು ಚಿತ್ರಕಲಾಶಿಕ್ಷಣ ಮುಂದುವರೆಸಿ ಅಭಿವೃದ್ದಿ ಹೊಂದಲು ತಿಳಿಸಿದರು.ಬೆಂಗಳೂರಿಗೆ ವಿದ್ಯಾಭ್ಯಾಸ ಮುಂದುವರಿಸಲು ತೆರಳಿದೆ ಅಲ್ಲಿನ ಶ್ರೀ ಎಂ.ಟಿ.ವಿ.ಆಚಾರ್ಯರು ಗದಗದಲ್ಲಿ ಚಿತ್ರಕಲಾಶಿಕ್ಷಣ ಪಡೆಯಲು ಸೂಚಿಸಿ ಒಂದು ಸ್ಥಳ ಕಾದಿರಿಸಲು ಟೆಲಿಗ್ರಾಂ ಕೊಟ್ಟರು ನಾನು ಅಲ್ಲಿಗೆ ಹೋಗಿ ಅವಿಶ್ರಾಂತ ಪರಿಶ್ರಮದಿಂದ ಚಿತ್ರಕಲಾಶಿಕ್ಷಕ ತರಬೇತಿ ಜೊತೆ ಕಲಾಶಿಕ್ಷಣ,ಮೂರ್ತಿ ಶಿಲ್ಪ, ಟೈಲರಿಂಗ್ ಮತ್ತು ಟೈಪಿಂಗ್ ಶಿಕ್ಷಣ ಪಡೆದೆ. ಮನೆಗೆ ಮರಳಿದೆ. ಕಾನಾಮಡುವಿನಲ್ಲಿ ಶಿಕ್ಷಣ ತರಬೇತಿ ಕೇಂದ್ರ ಪ್ರಾರಂಭ ಆಗಿತ್ತು ಅಲ್ಲಿ ನಾನು ಚಿತ್ರಕಲಾ ಶಿಕ್ಷಕನಾಗಿ ಸೇರಿದೆ. 73-74-75 ರಲ್ಲಿ ತರಬೇತಿ ನೀಡಿ 77ರಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮರು ತಾಲ್ಲೂಕು ಕೊಂಡ್ಲಹಳ್ಳಿಯಲ್ಲಿ ಸೇರಿಕೊಂಡೆ. ಇಲ್ಲಿ ನನ್ನ ಶ್ರೀಮತಿ ಹೆಸರಿನಲ್ಲಿ ಹತ್ತಾರು ವೃತ್ತ ಪತ್ತಿಕೆ ಎಜನ್ಸಿಯನ್ನೂ ನಡೆಸಿದೆ. 1980ರಲ್ಲಿ ನಮ್ಮರಲಲಿ ಗ್ರಾಮಾಭಿವೃದ್ಧಿಗಾಗಿ ಒಂದು ಉಣ್ಣೆ ಹಂಜಿ ಮಾಡುವ ಯಂತ್ರ ಸ್ಥಾಪಿಸಿದೆ. ಇದು ಯಶಸ್ವಿಯಾಗಲಿಲ್ಲ. ಮಕ್ಕಳ ವಿದ್ಯಾಭ್ಯಾಸ ನಿಮಿತ್ತ ಚಳ್ಳಕೆರೆಗೆ ತೆರಳಿದೆ ಅಲ್ಲಿಂದ ಕೆಲಸ ನಿರ್ವಹಿಸಲು ಓಡಾಡುತ್ತಿದ್ದೆ. ಇಲ್ಲಿ ಮಕ್ಕಳಿಗೆ ಒಂದು ಡಿಟಿಪಿ ಸೆಂಟರ್ ಹಾಗೂ ಸ್ಕ್ರೀನ್ ಪ್ರಿಂಟಿಂಗ್ ಸ್ಥಾಪಿಸಿಕೊಟ್ಟಿದ್ದೆ.ಇದು ಲಾಭದಾಯಕವಾಗಲಿಲ್ಲ. ಮಕ್ಕಳ ವಿದ್ಯಾಭ್ಯಾ ಮುಗಿಯಿತು ಏನಾದರೂ ಉದ್ಯೋಗ ಮಾಡಲು. ತಿಳಿಸಿದೆ. ಅವರು ಟ್ರಾನ್ಸಪೋರ್ಟಿಂಗ್ ಮಾಡುವುದಾಗಿ ತಿಳಿಸಿದರು. ನಾನು ಎರಡು ವ್ಯಾನ ಕೊಡಿಸಿದೆ. ದಾವಣಗೆರೆ ಕಾರ್ಯಕ್ಸೇತ್ರವನ್ನಾಗಿ ಮಾಡಿಕೊಂಡರು. ತಾಯಿ ಮಕ್ಕಳನ್ನು ಕಳಿಸಿ ನಾನು ಕೊಂಡ್ಲಹಳ್ಳಿಗೆ ತೆರಳಿದೆ.ಟ್ರಾನ್ಸ ಪೋರ್ಟಿಂಗ್ ಕೈ ಕೊಟ್ಟಿತು. .ಸಾಕಷ್ಟು ಸಾಲವಾಯಿತು. ಉದ್ಯೋಗ ತೊರೆದು ಸಾಲ ತೀರಿಸಿ ದಾವಣಗೆರೆ ಸೇರಿದೆ. ಇಲ್ಲಿ ಜೈನ್ ವಿದ್ಯಾಲಯ, ಕೆ.ಎಸ್.ಎಸ್.ಡಿಎಡ್ ಕಾಲೇಜ್, ಜಿಲ್ಲೆ ಸಮಾಚಾರ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದೆ. ಕೆಲ ದಿನ ಕಲ್ಮಟ ಡಿ.ಎಡ್. ಕಲೇಜಿಗೂ ಹೋಗಿ ಬಂದೆ.ಬೆಂಗಳೂರಿನ ಕೇಂದ್ರೀಯ ವಿದ್ಯಾಲಕ್ಕೆ ಸೇರಿಕೊಂಡೆ ಅಲ್ಲಿ ಐದಾರು ವರ್ಷ ಕೆಲಸ ನಿರ್ವಹಿಸಿ ಗ್ರಾಮಕ್ಕೆ ಮರಳಿದೆ. ಇಲ್ಲಿನ ನಮ್ಮ ಶ್ರೀಗುರು ದತ್ತಾಂಜನೇಯ ದೇವಸ್ಥಾನದಲ್ಲಿ ಒಂಭತ್ತು ವರ್ಷ ಸೇವೆ ಸಲ್ಲಿಸಿ ಅನಾರೋಗ್ಯ ನಿಮಿತ್ತ ದಾವಣಗೆರೆಗೆ ಬಂದೆ.ನನ್ನ ಬಿಡುವಿನ ವೇಳೆಯಲ್ಲಿ ಏನಾದರೂ ಕೆಲಸ ಮಾಡಬೇಕೆಂದೆನಿಸಿ ಈ ಕಾಯಕಕ್ಕೆ ಕೈ ಹಾಕಿದ್ದೇನೆ.